Latest Articles

Understanding the Literary Achievements of King Krishnadevaraya

The Vijayanagara Empire witnessed the rule of mighty leaders whose capable administration propelled the province to global glory. People from all over the world engaged in trade within this empire, and renowned scholars contributed their wisdom, making it not only economically prosperous but also culturally rich. Different genres of literature like kāvya, nāṭaka, itihāsa, purāṇa, dāsa sāhitya, jaina sāhitya, were written and popularized under the patronage of Vijayanagar kings. Krishnadevaraya authored numerous literary works, displaying a genius that allowed him to resonate with the contemporary mindset of his readers, audience, or spectators. Among his works, Āmuktamālyada and Jambavati Pariṇayam have been published and are available, while Madālasacaritam and Satyavadhū Pariṇayam remain unavailable. This eight pages lengthy article examines about the content of King Krishnadevaraya's literary contributions and also gives a path to understand and appreciate his works with an eye towards social values of that time.

ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ- ಅರಣ್ಯ ಕಾಂಡ

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಅನೇಕ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಸರಣಿ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ನಂ ಅವರು ಬರೆಯುತ್ತಿರುವ ಈ ಭರತಕೌತುಕ ಅಂಕಣದಲ್ಲಿದೆ. ಈ ಸಲದ ಸಂಚಿಕೆಯಲ್ಲಿ ಅರಣ್ಯ ಕಾಂಡದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳನ್ನು ಕಾಣಬಹುದು. ಅದರಲ್ಲೂ ಪ್ರಾಚೀನ ಪೌರಾಣಿಕ ಇತಿಹಾಸಗಳಲ್ಲಿರುವ ಗಂಧರ್ವ, ಪೌಲಸ್ತ್ಯ ಮೊದಲಾದವರನ್ನು ಗೀತ-ನೃತ್ಯದ ಯಾವ್ಯಾವ ಗ್ರಂಥದ ಪರಿಭಾಷೆಗಳಿಗೆ ಜೊತೆಯಾಗಿ ಕಾಣಬಹುದೆಂದೂ ವಿವರಿಸಲಾಗಿದೆ. ಸುಮಾರು 17 ಪುಟಗಳ ಕುತೂಹಲಕಾರಿ ಶೋಧಲೇಖನವಿದು.

ಮಹಾಮುನಿ ಭರತ- ಅಧ್ಯಯನ ಕೃತಿ

ಡಾ. ಮನೋರಮಾ ಬಿ ಎನ್ ಅವರಿಂದ ರಚಿತವಾದ ಭರತಮುನಿಯ ದೇಶ-ಕಾಲ-ರಚನಾಶೈಲಿಗಳ ವಿಶೇಷತೆ, ನಾಟ್ಯಶಾಸ್ತ್ರದ ಅಧ್ಯಾಯಗಳ ಸಂಕ್ಷಿಪ್ತ ಪರಿಚಯವನ್ನು ಮತ್ತು ನಾಟ್ಯಶಾಸ್ತ್ರದ ಪ್ರಸ್ತುತತೆಯ ವಿಚಾರಗಳನ್ನು ಒಳಗೊಂಡ, ಫುಲ್ಸ್ಕೇಪ್ ಪುಟದಲ್ಲಿ ಸುಮಾರು 38 ಪುಟಗಳ ವರೆಗೂ ವಿಸ್ತರಿಸಿದ, ಅಧ್ಯಯನ ಕೃತಿಯಿದು. 2015ರಲ್ಲಿ ಪ್ರಕಟಗೊಂಡಿದ್ದ ಈ ಕೃತಿಯ ಮುದ್ರಿತ ಪ್ರತಿಗಳು ಮುಗಿದು ಹೋಗಿದ್ದು; ಆಸಕ್ತ ಓದುಗರ ಅಭಿಲಾಷೆಯ ಮೇರೆಗೆ ಈಗ ಇದರ ಪಿಡಿಎಫ್ ಆವೃತ್ತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಋಷಿ ಭರತನನ್ನು ತಿಳಿದುಕೊಳ್ಳುವ ಹಂಬಲದ ವಿದ್ಯಾರ್ಥಿಗಳಿಗೆ, ಸಂಶೋಧಕ ಬರೆಹಗಾರರಿಗೆ, ಎಲ್ಲ ಬಗೆಯ ಓದುಗರಿಗೆ ಆಪ್ಯಾಯನವಾಗುವಂತೆ ಈ ಕೃತಿಯ ಬರವಣಿಗೆ ಸರಳವಾಗಿದೆ. ಕೃತಿಯ ಹಕ್ಕುಗಳು ಸಂಫೂರ್ಣವಾಗಿ ಲೇಖಿಕೆಯದ್ದು.

ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ. ಅಯೋಧ್ಯಾಕಾಂಡ - ಉತ್ತರಾರ್ಧ

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಅನೇಕ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಸರಣಿ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ನಂ ಅವರು ಬರೆಯುತ್ತಿರುವ ಈ ಭರತಕೌತುಕ ಅಂಕಣದಲ್ಲಿದೆ. ಈ ಸಲದ ಸಂಚಿಕೆಯಲ್ಲಿಅಯೋಧ್ಯಾ ಕಾಂಡದ ಉತ್ತರಾರ್ಧದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳನ್ನು ಕಾಣಬಹುದು. ಅದರಲ್ಲೂ ಪ್ರಾಚೀನ ಪೌರಾಣಿಕ ಇತಿಹಾಸಗಳಲ್ಲಿರುವ ವಿವಿಧ ಸಂಗೀತ-ನೃತ್ಯಕ್ಕೆ ಸಂಬಂಧಿಸಿದ ವಿವಿಧ ಪುರಾಣಪುರುಷರನ್ನು ರಾಮಾಯಣದ ಯಾವ್ಯಾವ ಪರಿಭಾಷೆಗಳಿಗೆ ಜೊತೆಯಾಗಿ ಕಾಣಬಹುದೆಂದೂ ವಿವರಿಸಲಾಗಿದೆ. ಸುಮಾರು 30 ಪುಟಗಳ ಕುತೂಹಲಕಾರಿ ಶೋಧಲೇಖನವಿದು.

Have an article to submit?

Submit your article here and we will get back to you

Submit Article