ಮಹಾಮುನಿ ಭರತ- ಅಧ್ಯಯನ ಕೃತಿ

Abstract

ಡಾ. ಮನೋರಮಾ ಬಿ ಎನ್ ಅವರಿಂದ ರಚಿತವಾದ ಭರತಮುನಿಯ ದೇಶ-ಕಾಲ-ರಚನಾಶೈಲಿಗಳ ವಿಶೇಷತೆ, ನಾಟ್ಯಶಾಸ್ತ್ರದ ಅಧ್ಯಾಯಗಳ ಸಂಕ್ಷಿಪ್ತ ಪರಿಚಯವನ್ನು ಮತ್ತು ನಾಟ್ಯಶಾಸ್ತ್ರದ ಪ್ರಸ್ತುತತೆಯ ವಿಚಾರಗಳನ್ನು ಒಳಗೊಂಡ, ಫುಲ್ಸ್ಕೇಪ್ ಪುಟದಲ್ಲಿ ಸುಮಾರು 38 ಪುಟಗಳ ವರೆಗೂ ವಿಸ್ತರಿಸಿದ, ಅಧ್ಯಯನ ಕೃತಿಯಿದು. 2015ರಲ್ಲಿ ಪ್ರಕಟಗೊಂಡಿದ್ದ ಈ ಕೃತಿಯ ಮುದ್ರಿತ ಪ್ರತಿಗಳು ಮುಗಿದು ಹೋಗಿದ್ದು; ಆಸಕ್ತ ಓದುಗರ ಅಭಿಲಾಷೆಯ ಮೇರೆಗೆ ಈಗ ಇದರ ಪಿಡಿಎಫ್ ಆವೃತ್ತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಋಷಿ ಭರತನನ್ನು ತಿಳಿದುಕೊಳ್ಳುವ ಹಂಬಲದ ವಿದ್ಯಾರ್ಥಿಗಳಿಗೆ, ಸಂಶೋಧಕ ಬರೆಹಗಾರರಿಗೆ, ಎಲ್ಲ ಬಗೆಯ ಓದುಗರಿಗೆ ಆಪ್ಯಾಯನವಾಗುವಂತೆ ಈ ಕೃತಿಯ ಬರವಣಿಗೆ ಸರಳವಾಗಿದೆ. ಕೃತಿಯ ಹಕ್ಕುಗಳು ಸಂಫೂರ್ಣವಾಗಿ ಲೇಖಕರವು.