Latest Articles

ರಾಮನೆಂಬ ಕಲೆಯ ಹೊಕ್ಕುಳಬಳ್ಳಿ

ರಾಮಮೂಲವಾದ ಭಾರತೀಯ ಸಂಜಾತ ಕಲೆಗಳ ವಿಶ್ಲೇಷಣೆ, ಆಚರಣೆ ಮತ್ತು ವಿಸ್ತಾರವನ್ನು ಕುರಿತಾದ ಈ ಲೇಖನದಲ್ಲಿ ನೃತ್ಯಾಸಕ್ತರಿಗೆ ಅನುವಾಗುವಂತ ನಾಯಕಭಾವದ ಭರತನಿರೀಕ್ಷೆಯೆಂಬ ಪದವರ್ಣದ ಸಾಹಿತ್ಯವೂ ಇದೆ. ಅಯೋಧ್ಯೆ ರಾಮನಿಗೆ ದಕ್ಕಿದ ಕಲಿಯುಗದ ವಿಧಿವಿಪರ್ಯಾಸದ ಹಿನ್ನೆಲೆಯಲ್ಲಿ ಈ ಲೇಖನದ ಭಾಗಶಃ ಅಂಶವು ಹೊಸದಿಗಂತ ಪತ್ರಿಕೆಯ ಬೃಹತ್ ೩೨ಪುಟಗಳ ಸಂಚಿಕೆಯಲ್ಲಿಯೂ ಪ್ರಕಟಗೊಂಡು ನಾಡಿನೆಲ್ಲೆಡೆ ಮನ್ನಣೆಗೆ ಪಾತ್ರವಾಗಿದೆ. ಈ ಲೇಖನ ಪೂರ್ಣರೂಪದಲ್ಲಿ ನೂಪುರ ಭ್ರಮರಿ ಸಂಶೋಢನ ವೇದಿಕೆಯಲ್ಲಿ ಈ ಮಾಸಿಕದ ಆವೃತ್ತಿಯ ಪ್ರಧಾನ ಸಂಭ್ರಮ ಲೇಖನವಾಗಿ ಬೆಳಕು ಕಾಣುತ್ತಿದೆ. 

ಪ್ರಾಚೀನ ಗೀತ-ನೃತ್ಯಪ್ರಬಂಧಗಳು/ಉಪರೂಪಕಗಳು : ರಾಸ - ಚರ್ಚರೀ - ಹಲ್ಲೀಸಕ ನೃತ್ಯಗಳು

ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು. ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 4 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ. ಪ್ರಸ್ತುತ ಈ ಸಂಚಿಕೆಯಲ್ಲಿ ಲೇಖಿಕೆಯವರು ಭಾರತದಲ್ಲಿ ಅಸಂಖ್ಯಾತವಾಗಿ ದೇಶೀಯವಾಗಿ ಹಬ್ಬಿರುವ ರಾಸ-ಹಲ್ಲೀಸಕ ಮತ್ತು ಚರ್ಚರೀ ನೃತ್ಯಗಳ ಇತಿಹಾಸ, ತಾಲವಿಧ, ನೃತ್ಯಕ್ರಮ, ಪ್ರಬಂಧಕ್ರಮಗಳ ಕುರಿತು ಸೋದಾಹರಣವಾಗಿ ೨೪ ಫುಲ್ ಸ್ಕೇಪ್ ಪುಟಗಳ ದೀರ್ಘ ಸಂಶೋಧನ ಲೇಖನ ಬರೆದಿದ್ದಾರೆ. ಅಧ್ಯಯನಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರೆಂದು ಪ್ರಾರ್ಥನೆ.    

ಕರ್ಣಾಟಕದಲ್ಲಿ ನೃತ್ಯ ಪರಂಪರೆ ಮತ್ತು ಆಧುನಿಕತೆ

ಡಾ. ಲಲಿತಾ ಶ್ರೀನಿವಾಸನ್ ಅವರ ಅಂಕಣ -ನೃತ್ಯ ನಿವೇದನ-ದಲ್ಲಿ ಈ ಸಲ ಕರ್ನಾಟಕದ ನೃತ್ಯಪರಂಪರೆ ಮತ್ತು ಆಧುನಿಕತೆ ಬಗ್ಗೆ  ಪರಾಮರ್ಶಿಸಿದ್ದಾರೆ.

Have an article to submit?

Submit your article here and we will get back to you

Submit Article