ಅಭಿನವಭೋಜ ಷಹಜಿಯ ರಾಗಲಕ್ಷಣಮು

(ಅಭಿನವಭೋಜ ಷಹಜೀ ಮಹಾರಾಜರ ರಾಗಲಕ್ಷಣಮು : ಒಂದು ತೌಲನಿಕ ಅಧ್ಯಯನ-(ಲೇಖಕರು) ಬಿ. ಇ. ಕಮಲಕುಮಾರ್, ಅನುಗ್ರಹ ಪ್ರಕಾಶನ, ಬೆಂಗಳೂರು-೨೦೧೯) - ಈ ಕೃತಿಗೆ ಬರೆದಿರುವ ಭೂಮಿಕೆ ಇದಾಗಿದ್ದು, ಮುದ್ರಿತವಾದ ಅನಂತರ ಕೆಲವೊಂದು ಆಕರಗಳ ವಿವರಗಳನ್ನು ಸೇರ್ಪಡೆ ಮಾಡಲಾಗಿದೆ ಮತ್ತು ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಪರಿಷ್ಕರಿಸಲಾಗಿದೆ} ತಂಜಾವೂರನ್ನು ಆಳಿದ ಮರಾಠ-ಭೋಸಲೆ ಸಂತತಿಯ ಪ್ರತಿಭಾಶಾಲಿ ದೊರೆ ಅಭಿನವಭೋಜ ಬಿರುದಾಂಕಿತ ಎರಡನೆಯ ಷಹಜಿ ಯಿಂದ ತೆಲುಗು ಭಾಷೆಯಲ್ಲಿ ರಚಿತವಾಗಿರುವ ಕರ್ನಾಟಕ ಸಂಗೀತದ ಶಾಸ್ತ್ರಕೃತಿ ‘ರಾಗಲಕ್ಷಣಮು’ವನ್ನು ಕುರಿತಾದ ಅಧ್ಯಯನ, ನಮ್ಮ ಗಮನಕ್ಕೆ ಬಂದಂತೆ, ಕನ್ನಡ ಭಾಷೆಯಲ್ಲಿ ಇದುವರೆಗೂ ನಡೆದಿರಲಿಲ್ಲ (ರಾ. ಸತ್ಯನಾರಾಯಣ ಅವರು ಕರ್ಣಾಟಕ ಸಂಗೀತ ವಾಹಿನಿಯಲ್ಲಿ ರಾಗಲಕ್ಷಣಮುವನ್ನು ತೌಲನಿಕ ವಿಮರ್ಶೆಗಾಗಿ ಕೆಲಮಟ್ಟಿಗೆ ಬಳಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇದರ ಬಗೆಗೆ ಬರಹಗಳೇ ಇಲ್ಲವೆಂದರೂ ನಡೆದೀತು). ಷಹಜಿಯ ಸಹೋದರನಾದ ತುಳಜನ ಸಂಗೀತ ಸಾರಾಮೃತದ ಬಗೆಗೆ ಮಾತ್ರ ರಾ. ಸತ್ಯನಾರಾಯಣ ಅವರು ಬರೆದಿದ್ದಾರೆ. ಇದನ್ನು ಹೊರತುಪಡಿಸಿ ತಂಜಾವೂರಿನ ಮರಾಠ ರಾಜರ ಸಂಗೀತ ಕೊಡುಗೆಯ ಬಗೆಗೆ ಕನ್ನಡ ಭಾಷೆಯಲ್ಲಿ ಯಾವುದೇ ಬರಹಗಳು ಇರಲಿಲ್ಲ. ಈ ಕೊರತೆಯನ್ನು ಮನಗಂಡ ಸಂಗೀತ ವಿದ್ವಾನ್ ಬಿ. ಇ. ಕಮಲಕುಮಾರ್ ಅವರು ಈ ಕೃತಿಯ ಬಗೆಗೆ ವಿಸ್ತೃತವಾದ ಅಧ್ಯಯನವನ್ನು ಡಾ. ಆರ್. ಶೇಷಶಾಸ್ತ್ರೀ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಮೀರಾ ರಾಜಾರಾಂ ಪ್ರಾಣೇಶ್ ಅವರ ಸಹಮಾರ್ಗದರ್ಶನದಲ್ಲಿ ಕೈಕೊಂಡು, ಅದನ್ನು ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿ.ಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಅವರ ಪಿ.ಎಚ್‌ಡಿ ನಿಬಂಧವೇ ಈಗ ಅಗತ್ಯಕ್ಕೆ ತಕ್ಕಂತೆ ಪರಿಷ್ಕೃತಗೊಂಡು ಪುಸ್ತಕರೂಪದಲ್ಲಿ ಪ್ರಕಟವಾಗಿದೆ. ಈ ಪುಸ್ತಕಕ್ಕೆ ಒಂದು ಭೂಮಿಕೆಯನ್ನು ಬರೆಯಬೇಕೆಂದು ಆರ್. ಶೇಷಶಾಸ್ತ್ರೀ ಅವರು ಅಭಿಮಾನದಿಂದ, ವಿಷಯ ದೃಷ್ಟಿಯಿಂದ ಮತ್ತು ಈ ಕ್ಷೇತ್ರದಲ್ಲಿ ಮಾಡಿರುವ ಅಲ್ಪಕೆಲಸದಿಂದ ಪ್ರಕೃತ ಲೇಖಕನಿಗೆ ಆದೇಶಿಸಿರುವ ಕಾರಣ, ಅದರಂತೆಯೇ ರಾಗಲಕ್ಷಣಮು ಕೃತಿಯನ್ನು ಮತ್ತು ಸಂಬಂಧಪಡುವ ಕೆಲವಂಶಗಳನ್ನು ವಿಶ್ಲೇಷಣೆಗೊಳಪಡಿಸಿ ಈ ಭೂಮಿಕೆಯನ್ನು ಬರೆಯಲಾಗಿದೆ. ಇದೊಂದು ಭೂಮಿಕೆಯೆಂದಷ್ಟೇ ಅಲ್ಲದೆ ವಿಸ್ತೃತ ಸಂಶೋಧನ ಪ್ರಬಂಧವೆನ್ನುವುದೇ ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಪ್ರಮುಖ ಕಾರಣ.

Karnataka Yakshagana and Kuchipudi : A brief study of both traditions in their presentation of mythological stories

  It is a brief study of both traditions in their presentation of mythological stories.This study, is based mainly on the knowledge and guidance given by the great scholar Shatavadhani Dr R. Ganesh who has been passionately refining and promoting the art of Yakshagana in Karnataka.    

ಭರತನಾಟ್ಯದಲ್ಲಿ ರಂಗಗೀತೆಗಳು ಹಾಗೂ ಚಲನಚಿತ್ರ ಗೀತೆಗಳ ಅಭಿವ್ಯಕ್ತಿಯ ಸಾಧ್ಯತೆಗಳು

ನಾಟಕಗಳಪ್ರಯೋಗಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದಲೇ ರಚಿತವಾದ ಹಾಡುಗಳನ್ನು ರಂಗಗೀತೆಗಳು ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಮೂಲನಾಟಕದ ಕೃತಿಯೊಂದರಲ್ಲಿ ಹಾಡುಗಳೇ ಇಲ್ಲದಿದ್ದಾಗ  ನಿರ್ದೇಶಕನು ನಾಟಕ ಒಂದರ ಪ್ರಯೋಗದಲ್ಲಿ ಹೆಚ್ಚಿನ ಪರಿಣಾಮವನ್ನು ನೀಡುವ ಉದ್ದೇಶದಿಂದ ಆಯಾ ಸಂದರ್ಭಗಳಿಗೆ ಔಚಿತ್ಯಪೂರ್ಣವಾಗಿ ಹೊಂದುವ ಇತರೆ ಯಾವುದೇ ಹಾಡು, ಗೀತೆ, ಕೀರ್ತನೆ, ಕೃತಿ, ಭಾವಗೀತೆ, ವಚನಸಾಹಿತ್ಯ, ಶ್ಲೋಕ, ದೇವರನಾಮ, ಜಾನಪದಗೀತೆ, ತತ್ವಪದ, ಹಳೆಗನ್ನಡ ಕಾವ್ಯದ ಹಾಗೂ ವೇದ ಉಪನಿಷತ್ತುಗಳ ತುಣುಕು, ಪಾಶ್ಚಿಮಾತ್ಯ ಸಂಗೀತ, ಮೊದಲಾದ ಪ್ರಕಾರಗಳನ್ನು ಬಳಸಿಕೊಳ್ಳುವ ಪರಿಪಾಠವಿದೆ. ಆದರೆ ಇವುಗಳನ್ನೂ ರಂಗಗೀತೆಗಳೆಂದು ಅರ್ಥೈಸುವುದು ಸರಿಯಾದ ಕ್ರಮವಲ್ಲ.

ಪುರುಷಾಭಿನಯ ಮತ್ತು ಶಾಸ್ತ್ರೀಯ ನೃತ್ಯ (ಭರತನಾಟ್ಯ)

ಭರತನಾಟ್ಯವೂ ಸೇರಿದಂತೆ ಇಂದು  ಕಾಣಬರುವ ಭಾರತದ ಎಲ್ಲಾ ಶಾಸ್ತ್ರೀಯ ನೃತ್ಯ ಪರಂಪರೆಯ  ಕಛೇರಿಪದ್ಧತಿಯಲ್ಲಿ  ನಾಯಕಾಭಿನಯದ ಕೊರತೆ ಎದ್ದು ಕಾಣುತ್ತಿದೆ. ಶಾಸ್ತ್ರೀಯನೃತ್ಯ ಎಂದೊಡನೆ ಅದು ಸ್ತ್ರೀಯರಿಗೆ ಮೀಸಲಾದಕಲೆಎಂದು ಜನಸಾಮಾನ್ಯರು ಭಾವಿಸುವಂತಹ ಸನ್ನಿವೇಶ ನಿರ್ಮಾಣವಾಗಿರುವುದರಲ್ಲಿಯೂ ಸತ್ಯಾಂಶವಿದೆ. ಆದರೆ  ಕರ್ನಾಟಕವೂ ಸೇರಿದಂತೆ ಭಾರತದ   ಜಾನಪದನೃತ್ಯದಲ್ಲಾಗಲಿ ಚಲನಚಿತ್ರನೃತ್ಯದಲ್ಲಾಗಲಿ  ಪಾಶ್ಚಿಮಾತ್ಯನೃತ್ಯಕಲೆಗಳಲ್ಲಿ ನರ್ತಕಿಯರಿಗೆ ವಿಶೇಷ ಮನ್ನಣೆಗಳೇನು ಕಂಡುಬರುವುದಿಲ್ಲ. 

ನೃತ್ಯ ನಾಟಕಗಳಾಗಿ ಕನ್ನಡ ಕಾವ್ಯ : ಒಂದು ಅವಲೋಕನ

ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ‘ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ’*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ‘ಗೇಯನಾಟಕದ ಮೂಲ ಜನಪದ’*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.ಸುಮಾರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದ ಕಾಲಾವಧಿಯಲ್ಲಿ ರಚಿತವಾದ ಭರತನ ನಾಟ್ಯಶಾಸ್ತ್ರದಲ್ಲಿನ ನಾಟ್ಯಸಂಪ್ರದಾಯವು ಗೀತ, ವಾದ್ಯ, ನೃತ್ಯ ಹಾಗೂ ನಾಟಕದ ಅಂಶಗಳನ್ನೊಳಗೊಂಡ ರಂಗಪ್ರಯೋಗವಾಗಿದೆ. ಇದನ್ನು ನೃತ್ಯನಾಟಕವೆಂದೇ ಪರಿಗಣಿಸಬಹುದಾಗಿದ್ದು, ತನ್ಮೂಲಕ ಐತಿಹಾಸಿಕವಾಗಿ ಭಾರತದಲ್ಲಿನ ನೃತ್ಯನಾಟಕದ ಪ್ರಾಚೀನತೆಯನ್ನು ನಿರ್ಧರಿಸ ಬಹುದಾಗಿದೆ. ನಾಟ್ಯಶಾಸ್ತ್ರದ ರಚನೆಯ ಕಾಲಘಟ್ಟಕ್ಕೂ ಮೊದಲೇ ಈ ಕಲಾಪ್ರಕಾರವು ಸಾಕಷ್ಟು ಪ್ರೌಢಿಮೆ ಪಡೆದಿರುವುನ್ನು ಖಚಿತವಾಗಿ ಊಹಿಸಬಹುದಾಗಿದೆ.