ಭರತನಾಟ್ಯದಲ್ಲಿ ರಂಗಗೀತೆಗಳು ಹಾಗೂ ಚಲನಚಿತ್ರ ಗೀತೆಗಳ ಅಭಿವ್ಯಕ್ತಿಯ ಸಾಧ್ಯತೆಗಳು

Abstract

ನಾಟಕಗಳಪ್ರಯೋಗಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದಲೇ ರಚಿತವಾದ ಹಾಡುಗಳನ್ನು ರಂಗಗೀತೆಗಳು ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಮೂಲನಾಟಕದ ಕೃತಿಯೊಂದರಲ್ಲಿ ಹಾಡುಗಳೇ ಇಲ್ಲದಿದ್ದಾಗ  ನಿರ್ದೇಶಕನು ನಾಟಕ ಒಂದರ ಪ್ರಯೋಗದಲ್ಲಿ ಹೆಚ್ಚಿನ ಪರಿಣಾಮವನ್ನು ನೀಡುವ ಉದ್ದೇಶದಿಂದ ಆಯಾ ಸಂದರ್ಭಗಳಿಗೆ ಔಚಿತ್ಯಪೂರ್ಣವಾಗಿ ಹೊಂದುವ ಇತರೆ ಯಾವುದೇ ಹಾಡು, ಗೀತೆ, ಕೀರ್ತನೆ, ಕೃತಿ, ಭಾವಗೀತೆ, ವಚನಸಾಹಿತ್ಯ, ಶ್ಲೋಕ, ದೇವರನಾಮ, ಜಾನಪದಗೀತೆ, ತತ್ವಪದ, ಹಳೆಗನ್ನಡ ಕಾವ್ಯದ ಹಾಗೂ ವೇದ ಉಪನಿಷತ್ತುಗಳ ತುಣುಕು, ಪಾಶ್ಚಿಮಾತ್ಯ ಸಂಗೀತ, ಮೊದಲಾದ ಪ್ರಕಾರಗಳನ್ನು ಬಳಸಿಕೊಳ್ಳುವ ಪರಿಪಾಠವಿದೆ. ಆದರೆ ಇವುಗಳನ್ನೂ ರಂಗಗೀತೆಗಳೆಂದು ಅರ್ಥೈಸುವುದು ಸರಿಯಾದ ಕ್ರಮವಲ್ಲ.