ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ- 2. ಅಯೋಧ್ಯಾಕಾಂಡ - ಪೂರ್ವಾರ್ಧ

Abstract

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಅನೇಕ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಸರಣಿ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ಮಂ ಅವರು ಬರೆಯುತ್ತಿರುವ ಈ ಭರತಕೌತುಕ ಅಂಕಣದಲ್ಲಿದೆ. ಈ ಸಲದ ಸಂಚಿಕೆಯಲ್ಲಿಅಯೋಧ್ಯಾ ಕಾಂಡದ ಮೊದಲನೇ ಭಾಗದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳ ಬಗ್ಗೆ ಬರೆದಿದ್ದಾರೆ. ಸುಮಾರು 26 ಪುಟಗಳ ಶೋಧಲೇಖನವಿದು.