Suyodhana : Yaksha Bhanika/ ಸುಯೋಧನ - ಯಕ್ಷಭಾಣಿಕಾ ನಾಟ್ಯ

Abstract

https://www.youtube.com/watch?v=LyEaikQ4dRs&feature=youtu.be ಯಕ್ಷಗಾನ ಮತ್ತು ಭಾರತೀಯ ಸಾಂಪ್ರದಾಯಿಕ ನೃತ್ಯನಿಷ್ಠವಾದ ರಂಗಕಲೆಗಳ ಪ್ರತಿನಿಧಿಯಾದ ಭರತನೃತ್ಯ ಸಮಾಹಾರದ ಅಧ್ಯಯನನಿಷ್ಠ ಏಕವ್ಯಕ್ತಿಪ್ರಯೋಗವಿದು. ಆದ್ದರಿಂದಲೇ ಇದನ್ನು ಯಕ್ಷಭಾಣಿಕಾ ಎಂದು ಕರೆಯಲಾಗಿದೆ. ರಂಗಭೂಮಿ ಮತ್ತು ಭರತನೃತ್ಯದೊಳದ್ದಿದ ಯಕ್ಷಗಾನೀಯ ರೂಪಕಶೈಲಿ. ಇದರ ಅಭಿವ್ಯಕ್ತಿಯಾದದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ನೂಪುರ ಭ್ರಮರಿ (ರಿ.) ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ -ಭಾರತೀಯ ಸಾಂಪ್ರದಾಯಿಕ ರಂಗಭೂಮಿ- ಯಕ್ಷಗಾನ, ಭರತನೃತ್ಯ ಸಂಬಂಧ ಸಮನ್ವಯದ ಕುರಿತಾದ ಒಂದು ದಿನದ ರಾಜ್ಯಮಟ್ಟದ ವಿದ್ವತ್ ಪೂರ್ಣ ವಿಚಾರಸಂಕಿರಣದಲ್ಲಿ. ಡಿಸೆಂಬರ್ 15, 2020 ರಂದು ಬೆಂಗಳೂರಿನ ಜಯರಾಮ ಸೇವಾ ಮಂಡಳಿ. ಜಯನಗರ. ಸಾಹಿತ್ಯಾನುಸಂಧಾನ : ಯಕ್ಷಗಾನ ಪ್ರಸಂಗಗಳು- ಗದಾಯುದ್ಧ-ರಕ್ತರಾತ್ರಿ, ದುರ್ಯೋಧನ ವಧೆ, ಶ್ರೀಕೃಷ್ಣಸಂಧಾನ, ರನ್ನನ ಗದಾಯುದ್ಧ, ಕುಮಾರವ್ಯಾಸಭಾರತ, ಜೈಮಿನಿ ಮಹಾಭಾರತ, ಶೇಣಿಭಾರತ. ಪರ್ವ, ವ್ಯಾಸಭಾರತ, ಯುದ್ಧಭಾರತ, ವಚನಭಾರತ(ಆಂಶಿಕ) ರಂಗಪ್ರಸ್ತುತಿ ಮತ್ತು ಅಧ್ಯಯನ : ಡಾ.ಮನೋರಮಾ ಬಿ.ಎನ್ ಪಾತ್ರಪರಿಕಲ್ಪನೆ : ಕೀರ್ತಿಶೇಷ ಬಿ.ಜಿ.ನಾರಾಯಣ ಭಟ್ ಸಲಹೆ ಮತ್ತು ಶಾಸ್ತ್ರಪೋಷಣೆ : ಶತಾವಧಾನಿ ಡಾ. ಆರ್. ಗಣೇಶ್ ಪದ್ಯ ಆಯ್ಕೆ -ಹಿಮ್ಮೇಳ ನಿರ್ದೇಶನ : ಉಜಿರೆ ಅಶೋಕ ಭಟ್ ಭರತನೃತ್ಯ ಮತ್ತು ರಂಗಭೂಮಿ ಸಹಕಾರ : ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ.ಶೋಭಾ ಶಶಿಕುಮಾರ್ ಹಿಮ್ಮೇಳ : ಕಾವ್ಯಶ್ರೀ ಅಜೇರು(ಭಾಗವತಿಕೆ), ವಿ|ಎಚ್.ಎಸ್.ವೇಣುಗೋಪಾಲ್(ಕೊಳಲು), ಕೃಷ್ಣಪ್ರಕಾಶ ಉಳಿತ್ತಾಯ(ಮೃದಂಗ/ಮದ್ದಳೆ), ಪ್ರಸನ್ನ ಕುಮಾರ್ (ರಿದಂಪ್ಯಾಡ್)