ನೃತ್ಯ ನಾಟ್ಯಗಳನ್ನು ಅನುಲಕ್ಷಿಸಿ ಅಭಿಜಾತ ಕಲೆಗಳ ನೆಲೆ-ಬೆಲೆ

Highlights

RNI No:KARKAN/2009/29752 ISSN No : 2321-2519

ನೂಪುರ ಭ್ರಮರಿ ಹತ್ತನೇ ವರ್ಷದ ದಶಮಾನೋತ್ಸವ ಆರಂಭ ಸಂಚಿಕೆಯಲ್ಲಿ ಪ್ರಕಟಿತ ಆಶಯ ಲೇಖನ 2016

ಮಾರ್ಗಶಿರ 2015 - ಆಷಾಢ 2016

ಸಂಪುಟ : 9

ಸಂಚಿಕೆ : 6

ಸಂಪುಟ : 10

ಸಂಚಿಕೆ : 1,2,3 ( ಕ್ಲಬ್ಡ್)

ನೃತ್ಯ-ನಾಟ್ಯಗಳನ್ನು ಅನುಲಕ್ಷಿಸಿ ಅಭಿಜಾತಕಲೆಗಳ ನೆಲೆ-ಬೆಲೆ-  ಶತಾವಧಾನಿ ಡಾ. ಆರ್. ಗಣೇಶ್


Abstract

 ಪ್ರಸ್ತುತ ಕಾಲಕ್ಕೆ ನೃತ್ಯಸಂಶೋಧನೆ ಎಂದರೇನು? ಯಾವ್ಯಾವ ಅವಕಾಶಗಳಿವೆ? ಯಾವ್ಯಾವ ವಿಷಯಗಳಲ್ಲಿ ಅಧ್ಯಯನ ನಡೆಸಬಹುದು? ಯಾವ ಮಟ್ಟಿನ ಬದ್ಧತೆಯನ್ನು ಯಾವ ವಿಷಯಗಳಿಗೆ ಕಾಪಾಡಿಕೊಳ್ಳಬೇಕು? ನೃತ್ತ-ನೃತ್ಯ-ನಾಟ್ಯಗಳನ್ನು ಇಂದಿನ ಕಾಲಕ್ಕೆ ಹೇಗೆ ವಿಭಾಗಿಸಿಕೊಂಡು ಅಧ್ಯಯನ ನಡೆಸಬೇಕು ?ಯಾವ ಬಗೆಯ ಆಶಯ-ಸಂವೇದನೆ-ತರ್ಕವಿರಬೇಕು? ಸಂಶೋಧನ ವಿಧಾನಗಳು, ಗುಣಮಟ್ಟ, ನೆಲೆ-ಬೆಲೆಗಳು ಹೇಗಿರಬೇಕು? ತೊಡಕುಗಳು ಎಲ್ಲಿವೆ? ಅಧ್ಯಯನ ನಮೂನೆಗಳು ಯಾವ್ಯಾವುದು ಲಭ್ಯವಿವೆ?- ಹೀಗೆ ಕಲಾಸಂಶೋಧನೆಯ ಆಳ ಅಗಲಗಳನ್ನು ವಿಸ್ತಾರವಾಗಿ ಚರ್ಚಿಸುವ ಮಾರ್ಗದರ್ಶಕವಾದ ಪ್ರೌಢ ಲೇಖನ.