ರಸೈಕ್ಯವಿಲ್ಲದ ನೃತ್ಯನಾಟಕವು ರಸನಿಷ್ಠೆಯಿರುವ ಏಕಾಹರ್ಯ/ಏಕಾಹರ್ಯವಾಗಲಿ

Highlights

- ರಾಷ್ಟ್ರೀಯ ನೃತ್ಯ ಸಂಶೋಧನ ಸಮ್ಮೇಳನದ ಆಶಯ ಭಾಷಣ

ನೂಪುರ ಭ್ರಮರಿ 8ನೇ ವರ್ಷದ 2ನೇ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ

ರಸೈಕ್ಯವಿಲ್ಲದ ನೃತ್ಯನಾಟಕವು ರಸನಿಷ್ಠೆಯಿರುವ ಏಕಹಾರ್ಯ/ಏಕಾಹಾರ್ಯವಾಗಲಿ- ಶತಾವಧಾನಿ ಡಾ.ಆರ್. ಗಣೇಶ್

Abstract

 ಚಲನಚಿತ್ರಕ್ಕೂ, ಅಭಿಜಾತ ಕಲೆಗೂ ಇರುವ ನಂಟೇನು? ಐಟಂ ಡ್ಯಾನ್ಸ್ ಅಭಿಜಾತ ಕಲೆಗಳಲ್ಲೂ ಇದೆಯೇ? ಇಂದಿನ ನೃತ್ಯನಾಟಕಕ್ಕೆ ರುಚಿಶುದ್ಧಿ ಎಷ್ಟಿದೆ? ನೃತ್ಯನಾಟಕದೆಡೆಗೆ ಪ್ರೇಕ್ಷಕರ ನಾಡಿಮಿಡಿತ ಹೇಗಿದೆ? ನೃತ್ಯಗಳ ಆಶಯ ಸಾಕಾರವಾಗುವುದು ಯಾವ ದಾರಿಯಲ್ಲಿ? ಏಕಾಹಾರ್ಯದ ಅನುಕೂಲತೆ, ಸಾಧ್ಯತೆಗಳೇನು? ಯಾವ ಬಗೆಯ ನೃತ್ಯದಿಂದ ಜನರನ್ನು ಸುಲಭವಾಗಿ ಮುಟ್ಟಬಹುದು? ನೃತ್ಯ ನಿರೀಕ್ಷಿಸುತ್ತಿರುವ ಚಿಕಿತ್ಸಕ ನೆಲೆಗಳೇನು? ಯಾವ ಬಗೆಯ ಪ್ರಾಯೋಗಿಕ ನೆಲೆಗಳಲ್ಲಿ ನೃತ್ಯವನ್ನು ಶ್ರೀಮಂತವಾಗಿಸಬಹುದು? - ಹೀಗೆ ಭಾರತೀಯ ಅಭಿಜಾತ ನೃತ್ಯಗಳ ಸಾಧ್ಯತೆ, ಮಿತಿ, ಅನುಕೂಲ, ಕಲಾವಿದರ ನೋಟಗಳು ಹರಿಯಬೇಕಾದ ನೆಲೆಗಳ ಬಗ್ಗೆ ಪ್ರೌಢ ವಿದ್ವತ್ಪೂರ್ಣ ಲೇಖನ.