ಸಖೀಕರ್ಮಗಳು - ಆದರ್ಶ ಸಖಿ ಚಿತ್ರಲೇಖೆ

Abstract

ಭರತನಾಟ್ಯದಲ್ಲಿ M.A. ಮಾಡುತ್ತಿದ್ದಾಗ ಡಾ. ದ್ವರಿತ ವಿಶ್ವನಾಥ ಅವರು ನೀಡಿದ ಅತ್ಯುತ್ತಮ ಮಾರ್ಗದರ್ಶನ ಇಂದು ವಿವಿಧ ದಿಕ್ಕುಗಳಲ್ಲಿ ಸಂಶೋಧನೆ ಕೈಗೊಳ್ಳಲು ಮನಸ್ಸನ್ನು ಪ್ರೇರೇಪಿಸುತ್ತಿದೆ. ಸಂಶೋಧನಾ ವಿಧಾನವು ಶೃಂಗಾರ ಮಂಜರಿ, ರಸಮಂಜರಿ, ಶೃಂಗಾರ ತಿಲಕ, ದಶರೂಪಕ ಇತ್ಯಾದಿ ಗ್ರಂಥಗಳಲ್ಲಿ ವಿವರಿಸಿರುವ ಸಖೀ ಲಕ್ಷಣಗಳನ್ನು ಸಂಗ್ರಹಿಸಲಾದ ವಿಷಯವನ್ನು ಹೊಂದಿದ್ದು; ಕನಕದಾಸರ ಮೋಹನತರಂಗಿಣಿಯಲ್ಲಿ ಉಲ್ಲೇಖಿತವಾದ ಚಿತ್ರಲೇಖೆಯ ಕೃತ್ಯಗಳ ಮೂಲಕ ಸಖೀ ಲಕ್ಷಣಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದು ನೃತ್ಯಸಂಯೋಜನೆಯನ್ನು ನಡೆಸುವವರಿಗೆ ಅತ್ಯುಪಯುಕ್ತವಾದ ಸುಳುಹನ್ನು ಕೊಡುತ್ತದೆ.