ಕನ್ನಡ ಚಲನಚಿತ್ರಗೀತೆಗಳು ಶಾಸ್ತ್ರೀಯನೃತ್ಯಕ್ಕೆ ಹೊಂದಿಕೊಳ್ಳಬಲ್ಲಷ್ಟು ಸಾಮರ್ಥ್ಯ ಇರುವಂಥವೇ? ಹಾಗಿದ್ದರೆ ಭರತನಾಟ್ಯ ಕಛೇರಿಗಳಲ್ಲಿ ಅವುಗಳನ್ನು ಬಳಸಿಕೊಳ್ಳಬಹುದೇ? ಯಾವ್ಯಾವ ಗೀತೆಗಳಿಗೆ ಆ ಅನುಕೂಲತೆ ಇದೆ? ಯಾವ ಮಾದರಿಯ ನೃತ್ಯಸಂವೇದನೆಗಳು ಅವಕ್ಕಿರಬೇಕು? ಸಾಹಿತ್ಯದ ಸೊಗಸು ಹೇಗಿರಬೇಕು? - ಇತ್ಯಾದಿಗಳ ಕುರಿತು ಸ್ವಾರಸ್ಯಪೂರ್ಣವಾದ ಅಧ್ಯಯನ ಲೇಖನವಿದು.
This document consists the documentation of performing Arts Phd's and D.litt from the people of Karnataka till 2010 in various universities.
ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ‘ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ’*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ‘ಗೇಯನಾಟಕದ ಮೂಲ ಜನಪದ’*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.ಸುಮಾರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದ ಕಾಲಾವಧಿಯಲ್ಲಿ ರಚಿತವಾದ ಭರತನ ನಾಟ್ಯಶಾಸ್ತ್ರದಲ್ಲಿನ ನಾಟ್ಯಸಂಪ್ರದಾಯವು ಗೀತ, ವಾದ್ಯ, ನೃತ್ಯ ಹಾಗೂ ನಾಟಕದ ಅಂಶಗಳನ್ನೊಳಗೊಂಡ ರಂಗಪ್ರಯೋಗವಾಗಿದೆ. ಇದನ್ನು ನೃತ್ಯನಾಟಕವೆಂದೇ ಪರಿಗಣಿಸಬಹುದಾಗಿದ್ದು, ತನ್ಮೂಲಕ ಐತಿಹಾಸಿಕವಾಗಿ ಭಾರತದಲ್ಲಿನ ನೃತ್ಯನಾಟಕದ ಪ್ರಾಚೀನತೆಯನ್ನು ನಿರ್ಧರಿಸ ಬಹುದಾಗಿದೆ. ನಾಟ್ಯಶಾಸ್ತ್ರದ ರಚನೆಯ ಕಾಲಘಟ್ಟಕ್ಕೂ ಮೊದಲೇ ಈ ಕಲಾಪ್ರಕಾರವು ಸಾಕಷ್ಟು ಪ್ರೌಢಿಮೆ ಪಡೆದಿರುವುನ್ನು ಖಚಿತವಾಗಿ ಊಹಿಸಬಹುದಾಗಿದೆ.
This journal issue consist the first documentation + interviews on renowned female role impersonators of Yakshagana ( Stree patradhaari- Stree vesha ) in kannada language by Dr Manorama B N
1. Kolyur Ramachandra Rao
2. Patala Venkatramana Bhat
3. Amba prasad Patala
4. Mantapa Prabhakara Upadhyaya
5. Begaru Shivakumar
6. Subhramanya Yalaguppa
and also the prestigious Kannada language columns such as Ashtanayika- Proshita patika - by Shatavadhani Dr R Ganesh
Nritya- Andu indu mundu - by Guru Muralidhar Rao Bigoraphical sketches of Rukmini devi Arundale Article on Bharatanatya in Abroad Article Tribute to Late Sundari Santanam by renowned dancers and many more special columns