ಜಾಯಪಸೇನಾನಿಯ ನೃತ್ತರತ್ನಾವಳೀ- ಲಾಸ್ಯಾಂಗಗಳು

ಜಾಯಪಸೇನಾನಿಯ ನೃತ್ತರತ್ನಾವಳೀ- ಭಾಗ ೬- ಲಾಸ್ಯಾಂಗಗಳು ಇಲ್ಲಿ ಕಾಂಚನಾ ರೋಹಿಣಿ ಸುಬ್ಬರತ್ನಂ ಅವರಿಂದ ಸಂಪಾದಿಸಲ್ಪಟ್ಟ ಈ ಗ್ರಂಥದ ಪಾರಿಭಾಷಿಕ ಪದಗಳ ಅರ್ಥ ಮತ್ತು ಪರಿಚಯವನ್ನೂ ಕೊಡಲಾಗಿದೆ. 

ಅಷ್ಟನಾಯಿಕೆಯರು ( ನಾಯಿಕಾಭಾವದ ವಿವರಗಳು ಮತ್ತು ಕನ್ನಡಸಾಹಿತ್ಯ)

ಈ ಲೇಖನ - ಪದ್ಯಗಳು ಕನ್ನಡ ಸಾಹಿತ್ಯ ಮತ್ತು ನೃತ್ಯಲೋಕಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳಲ್ಲೊಂದು. ಇದನ್ನಾಧರಿಸಿ ಮಂಟಪ ಪ್ರಭಾಕರ ಉಪಾಧ್ಯಯರ ಏಕವ್ಯಕ್ತಿ ಯಕ್ಷಗಾನದಲ್ಲಿ ಮೈದಾಳೀದ ’ಭಾಮಿನಿ’ ಐತಿಹಾಸಿಕ ಲೋಕಪ್ರಸಿದ್ಧ ಯಕ್ಷರಂಗಪ್ರಯೋಗ. ಇದನ್ನು ನೃತ್ಯ ಕಲಾವಿದರು, ಅಧ್ಯಯನನಿಷ್ಠರು ಬಳಸಿಕೊಳ್ಳುವ ದೃಷ್ಟಿಯಿಂದ ಅಷ್ಟನಾಯಿಕೆಯರನ್ನಾಧರಿಸಿದ ವಿವರ ಮತ್ತು ಕಾವ್ಯವನ್ನು ಇಲ್ಲಿ ನೀಡಲಾಗಿದೆ. ಇದಕ್ಕೆ ಪೂರಕವಾದ ಅಷ್ಟನಾಯಕಾ ವಿವರಗಳು ಮತ್ತು ಸಾಹಿತ್ಯ ಹಾಗೂ ನಾಯಿಕೆ-ನಾಯಕರನ್ನಾಧರಿಸಿದ ಲೇಖನವೊಂದು ಇದೇ ನಿಯತಕಾಲಿಕೆಯ ಸಂಚಿಕೆಗಳಲ್ಲಿದೆ.    

ಅಷ್ಟನಾಯಕ ( ನೂತನ ನಾಯಕ ಪರಿಕಲ್ಪನೆಯ ವಿವರಗಳು ಮತ್ತು ಕನ್ನಡ ಸಾಹಿತ್ಯ)

ಈ ಲೇಖನ- ಪದ್ಯಗಳು ಸ್ವತಂತ್ರ ಚಿಂತನೆ ಮತ್ತು ಪರಿಕಲ್ಪನೆಯಲ್ಲಿ ಕನ್ನಡ ಸಾಹಿತ್ಯ ಮತ್ತು ನೃತ್ಯಲೋಕಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳಲ್ಲೊಂದು. ಅಷ್ಟನಾಯಕರನ್ನಾಧರಿಸಿದ ವಿವರಗಳೂ ಮತ್ತು ನೂತನ ಕಾವ್ಯಪ್ರಸಕ್ತಿಯನ್ನೂ ಇಲ್ಲಿ ನೀಡಲಾಗಿದೆ. ಇದಕ್ಕೆ ಪೂರಕವಾದ ಅಷ್ಟನಾಯಿಕಾ ವಿವರಗಳು ಮತ್ತು ಸಾಹಿತ್ಯ ಹಾಗೂ ನಾಯಿಕೆ-ನಾಯಕರನ್ನಾಧರಿಸಿದ ಲೇಖನವೊಂದು ಇದೇ ನಿಯತಕಾಲಿಕೆಯ ಸಂಚಿಕೆಗಳಲ್ಲಿದೆ.

ರಸಲೋಕದ ನಾಯಿಕಾ ನಾಯಕರು

ಈ ವಿದ್ವದ್ಲೇಖನವು ನಾಯಿಕಾ ನಾಯಕಾವೃತ್ತಿಯ ಪರಿಕಲ್ಪನೆ ಮತ್ತು ನಾಟ್ಯ-ನೃತ್ಯಾದಿಗಳಲ್ಲಿ ಅವುಗಳ ಪೋಷಣೆಯ ಕುರಿತ ಸ್ವತಂತ್ರ ಚಿಂತನೆ ಮತ್ತು ಪರಿಕಲ್ಪನೆಯನ್ನು ನಿರ್ದೇಶಿಸುವ ಅಧ್ಯಯನಿಷ್ಟ ಲೇಖನವಾಗಿದೆ. ಇದಕ್ಕೆ ಪೂರಕವಾದ ಅಷ್ಟನಾಯಿಕಾ ಮತ್ತು ಅಷ್ಟನಾಯಕರ ಮನೋವೃತ್ತಿ ಹಾಗೂ ಸಾಹಿತ್ಯ/ಕಾವ್ಯಗಳ ಲೇಖನವು ಪ್ರಪ್ರತ್ಯೇಕವಾಗಿ ಇದೇ ನಿಯತಕಾಲಿಕೆಯ ಸಂಚಿಕೆಗಳಲ್ಲಿ ಲಭ್ಯವಿದೆ.