ಧಾರ್ಮಿಕ ದೇಶೀ ನೃತ್ತ- ಚಿಂದು : ಗೀತ -ನೃತ್ತ-ನೃತ್ಯ ಪದ್ಧತಿ

ನಾಡಿನ ಸುವಿಖ್ಯಾತ ಗಾನ-ನೃತ್ಯ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಭರತಕೌತುಕ ಅಂಕಣದಲ್ಲಿ ದಕ್ಷಿಣ ಭಾರತದ ಹೆಸರಾಂತ ಚಿಂದೂ ನೃತ್ತ-ಗೀತಗಳ ಬಗ್ಗೆ ಸವಿಸ್ತಾರವಾದ 32 ಪುಟಗಳ ಸಂಶೋಧನ ಲೇಖನವನ್ನೇ ಬರೆದಿದ್ದಾರೆ. 

ನೃತ್ತರತ್ನಾವಳೀ- ಲಾಸ್ಯಾಂಗ ಸಹಿತ ಪಾರಿಭಾಷಿಕ ಅರ್ಥಗಳು

ಲಾಸ್ಯಾಂಗಗಳು- ಭಾಗ 3 - (ನಾಟ್ಯಶಾಸ್ತ್ರ ಮತ್ತು ದೇಶೀಯ ಲಕ್ಷಣಗ್ರಂಥಗಳನ್ನು *ನೃತ್ತರತ್ನಾವಳಿಯನ್ನು ಪ್ರಧಾನವಾಗಿ ಅನುಲಕ್ಷಿಸಿ)   ನಾಡಿನ ಸುವಿಖ್ಯಾತ ಗಾನ-ನೃತ್ಯ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಭರತಕೌತುಕ ಅಂಕಣದಲ್ಲಿ. ಪ್ರಕೃತ  ಲಾಸ್ಯಾಂಗದ ಅಧ್ಯಯನಫಲಶ್ರುತಿಯಾದ ವಿವರಗಳೊಂದಿಗೆ ಅನೇಕ ಪಾರಿಭಾಷಿಕ ಅರ್ಥಗಳ ವಿವರಗಳನ್ನೂ ನೀಡಲಾಗಿದೆ.

ಲಾಸ್ಯಾಂಗಗಳು (ನಾಟ್ಯಶಾಸ್ತ್ರ ಮತ್ತು ದೇಶೀಯ ಲಕ್ಷಣಗ್ರಂಥಗಳನ್ನು *ನೃತ್ತರತ್ನಾವಳಿಯನ್ನು ಪ್ರಧಾನವಾಗಿ ಅನುಲಕ್ಷಿಸಿ) ಭಾಗ ೨

ಲಾಸ್ಯಾಂಗಗಳು- ಭಾಗ ೨ - (ನಾಟ್ಯಶಾಸ್ತ್ರ ಮತ್ತು ದೇಶೀಯ ಲಕ್ಷಣಗ್ರಂಥಗಳನ್ನು *ನೃತ್ತರತ್ನಾವಳಿಯನ್ನು ಪ್ರಧಾನವಾಗಿ ಅನುಲಕ್ಷಿಸಿ)   ನಾಡಿನ ಸುವಿಖ್ಯಾತ ಗಾನ-ನೃತ್ಯ ವಿದುಷಿ ಕಾಂಚನಾ ರೋಹಿಣಿ ಸುಬ್ಬರತ್ನಂ ಅವರ ಭರತಕೌತುಕ ಅಂಕಣದಲ್ಲಿ. ಪ್ರಕೃತ ಗೇಯಪದದಿಂದ ತ್ರಿಮೂಢಕದವರೆಗೆ ಐದು ಬಗೆಯ ಲಾಸ್ಯಾಂಗದ ಅಧ್ಯಯನಫಲಶ್ರುತಿಯಾದ ವಿವರಗಳಿವೆ.

ಅಭಿಜಾತನೃತ್ಯ ಮತ್ತು ಯಕ್ಷಗಾನ: ಒಂದು ವಿವೇಚನೆ

ಅಭಿಜಾತ ನೃತ್ಯಗಳ ಸಹೋದ್ಯೋಗದಲ್ಲಿ ಯಕ್ಷಗಾನದ ಪಾತ್ರ ಎಷ್ಟು, ಕೊಡು-ಕೊಳ್ಳುವಿಕೆಗಳನ್ನು ಹೇಗೆ ಗಮನಿಸಿಕೊಳ್ಳಬೇಕು, ಎಂಬುದರ ಬಗ್ಗೆ ನೃತ್ತ-ನೃತ್ಯ-ನಾಟ್ಯದ ವಿವೇಚನೆಯ  ಕುರಿತ ತತ್ತ್ವಪ್ರಬೋಧಕ ವಿದ್ವತ್ಪೂರ್ಣ ಲೇಖನ- ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ.ಆರ್.ಗಣೇಶರಿಂದ.   ಇದರ ವಿವೇಚನೆಯು ನೂಪುರ ಭ್ರಮರಿ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಡಿಸೆಂಬರ್ 15, 2019 ರಂದು ಆಯೋಜಿಸಿದ ಒಂದು ದಿನದ ರಾಜ್ಯಮಟ್ಟದ ಭಾರತೀಯ ರಂಗಭೂಮಿ, ಯಕ್ಷಗಾನ ಹಾಗೂ ಭರತನೃತ್ಯಾದಿ ಕಲೆಗಳಿಗಿರುವ ಸಂಬಂಧ ಮತ್ತು ಸಮನ್ವಯ  ವಿಚಾರ ಸಂಕಿರಣದಲ್ಲಿ ಪ್ರಾತ್ಯಕ್ಷಿಕೆಯ ಸಮೇತ ಮಂಡಿಸಲ್ಪಟ್ಟಿದೆ. ಅದರ ವರದಿಗೆ ಗಮನಿಸಿ : http://www.noopurabhramari.com/yakshagana-and-bharatanritya-confluence-seminar-review/ http://www.noopurabhramari.com/narayanasmarana-and-seminar-on-yakshagana-bharatanritya-confluence-with-yakshabhanika/

ಅವಧಾನ ಪಲ್ಲವಿ – ತಾಳಾವಧಾನ ವಿಶಿಷ್ಟ, ಸವಾಲಿನ ತಾಳ ಕಲೆ

ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು. ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 5 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ.  ಈ ಸಲದ ಸಂಚಿಕೆಯ ಭರತ ಕೌತುಕ- ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಅಂಕಣದಲ್ಲಿ ಅವಧಾನ ಪಲ್ಲವಿ – ತಾಳಾವಧಾನ ಎಂಬ ವಿಶಿಷ್ಟ, ಸವಾಲಿನ ತಾಳ ಕಲೆ ಯ ಬಗ್ಗೆ ಸವಿವರವಾದ ಶೋಧಲೇಖನವನ್ನೇ ಬರೆದಿದ್ದಾರೆ.