ಪ್ರಾಚೀನ ಗೀತ-ನೃತ್ಯಪ್ರಬಂಧಗಳು/ಉಪರೂಪಕಗಳು : ರಾಸ - ಚರ್ಚರೀ - ಹಲ್ಲೀಸಕ ನೃತ್ಯಗಳು

ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು. ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 4 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ. ಪ್ರಸ್ತುತ ಈ ಸಂಚಿಕೆಯಲ್ಲಿ ಲೇಖಿಕೆಯವರು ಭಾರತದಲ್ಲಿ ಅಸಂಖ್ಯಾತವಾಗಿ ದೇಶೀಯವಾಗಿ ಹಬ್ಬಿರುವ ರಾಸ-ಹಲ್ಲೀಸಕ ಮತ್ತು ಚರ್ಚರೀ ನೃತ್ಯಗಳ ಇತಿಹಾಸ, ತಾಲವಿಧ, ನೃತ್ಯಕ್ರಮ, ಪ್ರಬಂಧಕ್ರಮಗಳ ಕುರಿತು ಸೋದಾಹರಣವಾಗಿ ೨೪ ಫುಲ್ ಸ್ಕೇಪ್ ಪುಟಗಳ ದೀರ್ಘ ಸಂಶೋಧನ ಲೇಖನ ಬರೆದಿದ್ದಾರೆ. ಅಧ್ಯಯನಾರ್ಥಿಗಳು ಸದುಪಯೋಗಪಡಿಸಿಕೊಳ್ಳಿರೆಂದು ಪ್ರಾರ್ಥನೆ.    

ಮಯೂರ ನೃತ್ಯ

ಭಾರತದಾದ್ಯಂತ ಕಂಡುಬರುವ ಮಯೂರ ನೃತ್ಯ (ನವಿಲಿನ ನೃತ್ಯ)ದ ಸಾಧ್ಯತೆ, ಸಾಧನೆ, ವೈವಿಧ್ಯ, ವಿಶಿಷ್ಟ್ಯಗಳ ಕುರಿತಂತೆ  ಭರತ ಕೌತುಕ ಅಂಕಣಕ್ಕೆ ಬರೆದ  ಶೋಧ ಲೇಖನವಿದು. 

ಜಾಯಪಸೇನಾನಿಯ ನೃತ್ತರತ್ನಾವಳೀ- ಲಾಸ್ಯಾಂಗಗಳು

ಜಾಯಪಸೇನಾನಿಯ ನೃತ್ತರತ್ನಾವಳೀ- ಭಾಗ ೬- ಲಾಸ್ಯಾಂಗಗಳು ಇಲ್ಲಿ ಕಾಂಚನಾ ರೋಹಿಣಿ ಸುಬ್ಬರತ್ನಂ ಅವರಿಂದ ಸಂಪಾದಿಸಲ್ಪಟ್ಟ ಈ ಗ್ರಂಥದ ಪಾರಿಭಾಷಿಕ ಪದಗಳ ಅರ್ಥ ಮತ್ತು ಪರಿಚಯವನ್ನೂ ಕೊಡಲಾಗಿದೆ. 

ಅಷ್ಟನಾಯಿಕೆಯರು ( ನಾಯಿಕಾಭಾವದ ವಿವರಗಳು ಮತ್ತು ಕನ್ನಡಸಾಹಿತ್ಯ)

ಈ ಲೇಖನ - ಪದ್ಯಗಳು ಕನ್ನಡ ಸಾಹಿತ್ಯ ಮತ್ತು ನೃತ್ಯಲೋಕಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳಲ್ಲೊಂದು. ಇದನ್ನಾಧರಿಸಿ ಮಂಟಪ ಪ್ರಭಾಕರ ಉಪಾಧ್ಯಯರ ಏಕವ್ಯಕ್ತಿ ಯಕ್ಷಗಾನದಲ್ಲಿ ಮೈದಾಳೀದ ’ಭಾಮಿನಿ’ ಐತಿಹಾಸಿಕ ಲೋಕಪ್ರಸಿದ್ಧ ಯಕ್ಷರಂಗಪ್ರಯೋಗ. ಇದನ್ನು ನೃತ್ಯ ಕಲಾವಿದರು, ಅಧ್ಯಯನನಿಷ್ಠರು ಬಳಸಿಕೊಳ್ಳುವ ದೃಷ್ಟಿಯಿಂದ ಅಷ್ಟನಾಯಿಕೆಯರನ್ನಾಧರಿಸಿದ ವಿವರ ಮತ್ತು ಕಾವ್ಯವನ್ನು ಇಲ್ಲಿ ನೀಡಲಾಗಿದೆ. ಇದಕ್ಕೆ ಪೂರಕವಾದ ಅಷ್ಟನಾಯಕಾ ವಿವರಗಳು ಮತ್ತು ಸಾಹಿತ್ಯ ಹಾಗೂ ನಾಯಿಕೆ-ನಾಯಕರನ್ನಾಧರಿಸಿದ ಲೇಖನವೊಂದು ಇದೇ ನಿಯತಕಾಲಿಕೆಯ ಸಂಚಿಕೆಗಳಲ್ಲಿದೆ.