‘ನೃತ್ಯಾಧ್ಯಯನದ್ವಾರಾ ಶಿವಾರಾಧನೆ’- ಕಲಾಗೌರಿಯಲ್ಲಿ ನೂಪುರ ಭ್ರಮರಿ ನೃತ್ಯಸಂಶೋಧನ ವಿಚಾರಸಂಕಿರಣ

ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ‘ಕಲಾಗೌರಿ’ಯ ಸಹಭಾಗಿತ್ವದಲ್ಲಿ ಮಹಾಶಿವರಾತ್ರಿಯಂದು ನೃತ್ಯಾಧ್ಯಯನದ್ವಾರಾ ಶಿವಾರಾಧನೆಯನ್ನು ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣವನ್ನು ಬಸವನಗುಡಿಯ ಕಲಾಗೌರಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. 

ಲೋಕಧರ್ಮೀ ಮತ್ತು ನಾಟ್ಯಧರ್ಮೀಗಳ ಹದ ನೃತ್ಯ ಭೂಮಿಕೆಯಲ್ಲಿ

ಯಾವುದೇ ನೃತ್ಯ ಮಾರ್ಗವನ್ನು ಅವಲೋಕಿಸುವುದಿದ್ದರೂ ಪ್ರಧಾನವಾಗಿ ಲೋಕಧರ್ಮೀ ಮತ್ತು ನಾಟ್ಯಧರ್ಮೀಯನ್ನಾಧರಿಸಿ ವರ್ಗೀಕರಣಗಳು  ನಡೆಯುವುದು ಸಹಜ.  ಹಾಗೆ  ನೋಡಿದ್ರೆ ರಸಭಾವವುಯತ್ಪನ್ನವಾದ ನರ್ತನಕಲೆಗೆ ಕೇವಲ ನಾಟ್ಯಧರ್ಮೀಯೊಂದರ  ಅಳವಡಿಕೆಯು ಕೃತ್ಕತೆಯನ್ನು, ಕೇವಲ ಲೋಕಧರ್ಮೀಯೊಂದರ ಬಳಕೆಯು ಹಸಿತನವನ್ನು ಕೊಡುತ್ತದೆ  ಎಂಬುದು  ಗಮನಿಸಬೇಕಾದ ವಿಚಾರ.

ಸಿನಿಮಾ ನೃತ್ಯ ಮತ್ತು ಶಾಸ್ತ್ರೀಯತೆ

ಸಾಂಸ್ಕೃತಿಕ  ರಂಗಕ್ಕೂ ಸಮೂಹ ಮಾಧ್ಯಮಕ್ಕೂ ಇರುವ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ವ್ಯವಸ್ಥೆಯನ್ನು ಅರಿಯುವಲ್ಲಿ, ಪರಿಚಯಿಸುವಲ್ಲಿ ಅದರ ಒಳನೋಟಗಳನ್ನೆ-ಕಾಣ್ಕಕಗಳನ್ನು ಮನಗಾಣುವಲ್ಲಿ,ಪರಿಹಾರ ಕಂಡುಕೊಳ್ಳುವಲ್ಲಿ ಹೊಂದಾಣಿಕೆಗಳನ್ನು,ಅಳವಡಿಸಿಕೊಳ್ಳುವುದರಲ್ಲಿ ಭೂತ-ವತತಮಾನ-ಭವಿಷತ್ತಿನ ವಾಸ್ತವ ಪ್ರಜ್ಞೆಗಳನ್ನು ಅರಿತು ಬದುಕಿನ ಹಲವು ಸಾಧ್ಯತೆಗಳೆಡೆಗೆ ದೃಷ್ಟಿ ಹರಿಸುವಲ್ಲಿ ಇವೆರಡರ ಪಾತ ಅವರ್ಣನೀಯ.   

ನಾಟ್ಯಾವಧಾನವೆಂಬ ಅಸಾಮಾನ್ಯ ಸಾಧ್ಯತೆ

ಕರ್ನಾಟಕದ ಇತಿಹಾಸದಲ್ಲೇ  ಪ್ರಪ್ರಥಮವೆಂಬಂತೆ  ತುಂಬುಗನ್ನಡದಲ್ಲಿ ನಡೆದು ಇತಿಹಾಸದಲ್ಲಿ ದಾಖಲಾಗಿಹೋದ ಡಾ. ರಾ.ಗಣೇಶರ ಶತಾವಧಾನದ ಗುಂಗಿನಿಂದ ಹರಬರುವುದೆಂದರೆ ಅದೇನು ಸಾಮಾನ್ಯ ಮಾತೇ?ಹಾಗಾಗಿ ಅವಧಾನ ಕಳೆದು ದಿನಗಳುರುಳಿದರೂ ಅದರ ಸುಗಂಧ ಸಚ್ಚಿದಾನಂದ ಸ್ವರೂಪ ‘ಆನಂದ’ದಲ್ಲಿ ವರ್ಧಾಸುತ್ತಲೇ ಇದೆ.  

ಆಸ್ಥಾನ ನೃತ್ಯಪದ್ಧತಿಯ ಪೂರ್ವಾಪರ ನೆಲೆಗಳು

ಭಾರತೀಯ ನೃತ್ಯ ಪರಂಪರೆಯನ್ನು ಪಾಲಿಸಿ, ಪೋಷಿಸಿ ಬೆಳೆಸಿಕೊಂಡು ಬಂದವುಗಳಲ್ಲಿ ರಾಜಾಶ್ರ ಯ ತನ್ಮೂಲಕ ದೇವಾಲಯಗಳಿಗೆ ಹಿರಿದು ಸ್ಥಾ ನ. ಆದರೆ ಕಾಲಾಂತರದಲ್ಲಿ ಸಾಂಧರ್ಭಿಕ ಸಾಕ್ಷ್ಯಗಳು ಪರಿಪೂರ್ಣವಾಗಿ ನಿಲುಕದೇ ಕಾಲದ ಮರೆಯಲ್ಲಿ ಆಲಯ ಪದ್ದತಿಯ ಸರಿದುಹೋಯಿತು.ಆದಾಗ್ಯಯ ಉಳಿದುಕೊಂಡಿರುವ ಅವಶೇಷಗಳನ್ನು ಲಕ್ಷಿಸಿದರೆ, ಭಾರತೀಯ ನೃತ್ಯ ಪರಂಪರೆಯ ವೈಶಾಲಯತೆ, ಮಜಲುಗಳು, ಅಂದಿಗಿದ್ದ ವೈಭವಯುತ ಸ್ಥಾನಮಾನದ ಸಮಗ್ರ ಚಿತ್ರಣ ದೊರಕದೇ ಇರುವುದಿಲ್ಲ.